ಉತ್ತರಾಭಾದ್ರಪದ: ನಕ್ಷತ್ರಮಂಡಲದಲ್ಲಿ ಮಿನುಗುತ್ತಿರುವ ತಾರೆಗಳಲ್ಲಿ ಮುಖ್ಯವಾದು ವೆಂದು ಜ್ಯೋತಿರ್ವಿದರಿಂದ ಪರಿಗಣಿತವಾದ ಇಪ್ಪತ್ತೇಳು ನಕ್ಷತ್ರಗಳಲ್ಲಿ ಇಪ್ಪತ್ತಾರನೆಯದು. ಇದರಲ್ಲಿ ಎರಡು ನಕ್ಷತ್ರಗಳಿವೆ. ಇದರ ಧ್ರುವಕ 337 ಅಂಶಗಳು. ಶರ, ಉತ್ತರ 26 ಅಂಶಗಳು. ಖಗೋಳದಲ್ಲಿ ಇದರ ಸ್ಥಾನವನ್ನು ಈ ಎರಡು ಅಂಶಗಳಿಂದ ಗುರುತಿಸಬಹುದು. ಇದು ಮೀನ ರಾಶಿಗೆ ಸೇರಿದೆ.

ಪೌರಾಣಿಕವಾಗಿ, ದಕ್ಷಬ್ರಹ್ಮನ ಇಪ್ಪತ್ತೇಳು ಪುತ್ರಿಯರಲ್ಲಿ ಒಬ್ಬಾಕೆ. ಚಂದ್ರನ ಪತ್ನಿ.				(ಎಸ್.ಎನ್.ಕೆ.)
ಖಗೋಳಶಾಸ್ತ್ರದಲ್ಲಿ ಉತ್ತರಾಭಾದ್ರದ ಶಾಸ್ತ್ರನಾಮ (α) ಆ್ಯಂಡ್ರೊಮಿಡ. ಪರ್ಯಾಯ ನಾಮ ಆಲ್ಫೆರಾಟ್ಸ್‌ (ನೋಡಿ-ಆ್ಯಂಡ್ರೊಮಿಡ). ಇದು ಆ್ಯಂಡ್ರೋಮಿಡ ನಕ್ಷತ್ರ ಪುಂಜದ ಪ್ರಥಮ ನಕ್ಷತ್ರ. ನೀಲಿ ಬಣ್ಣದ್ದು.	

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ